Science Action plan 2020-21
* ವಿಷಯವಾರು ಕ್ರಿಯಾ ಯೋಜನೆ ರೂಪಿಸುವುದು.
* 4 ಕಿರು ಪರೀಕ್ಷೆ ನಡೆಸುವುದು.
* ಪ್ರತಿ ವಿಷಯದ 5 ಮಾದರಿ ಪ್ರಶ್ನೆ ಪತ್ರಿಕೆ ವಿದ್ಯಾರ್ಥಿಗಳು ಬಿಡಿಸುವುದು (ಕಡ್ಡಾಯ) ಪ್ರತಿ ಘಟಕದ ಮೇಲೆ ಘಟಕ ಪರೀಕ್ಷೆ ನಡೆಸುವುದು, ಮತ್ತು ದಾಖಲೆಗಳನ್ನು ನಿರ್ವಹಿಸುವುದು.
* ಬೆಳಗ್ಗೆ 8.30ರಿಂದ 9.30ರವರೆಗೆ ಹಾಗೂ ಸಾಯಂಕಾಲ 4.30 ರಿಂದ 5.30ರವರೆಗೆ ವಿಶೇಷ ತರಗತಿ ನಡೆಸುವುದು- (ಜುಲೈ 15ರಿಂದ ಬೆಳಿಗ್ಗೆ ಹಾಗೂ ನವೆಂಬರ್‌ನಿಂದ ಬೆಳಿಗ್ಗೆ ಮತ್ತುಸಾಯಂಕಾಲ)
ರಜಿಸ್ಟರ್‌ನಲ್ಲಿ ದಿನನಿತ್ಯ ತೆಗೆದುಕೊಂಡ ಪಾಠದ ವಿವರವನ್ನು ದಾಖಲಿಸುವುದು.
* ಪ್ರತಿ ಪಾಠದ ಮೇಲೆ ಒಂದು ಅಂಕದ ಹಾಗೂ ದೀರ್ಘ ಉತ್ತರದ ಪ್ರಶ್ನೆಗಳನ್ನು ತೆಗೆಯುವುದು.
* ಪ್ರತಿ ವಿಷಯದ ಪ್ರಶ್ನೆ ಕೋಠಿ ವಿದ್ಯಾರ್ಥಿಗಳು ತಯಾರಿಸುವುದು,
* ಪ್ರತಿ ವಿಷಯದ ಒಂದು ಪಾಸಿಂಗ್ ಪ್ಯಾಕೇಜ್ ಸಿದ್ಧಪಡಿಸುವುದು. ಅಳವಡಿಸಿಕೊಂಡು ಬೋಧಿಸುವುದು.
* 15ದಿನಕ್ಕೊಮ್ಮೆ ರಸಪ್ರಶ್ನೆ ಕಾರ್ಯಕ್ರಮ ನಡೆಸುವುದು ಮತ್ತು ದಾಖಲೆ ನಿರ್ವಹಿಸುವುದು.
* ಮೊದಲ ಅವಧಿ 5 ಹಾಗೂ ಎರಡನೇ ಅವಧಿಗೆ 5ರಂತೆ ಒಟ್ಟು 10 ಸೆಮಿನಾರ್ ನಡೆಸುವುದು ಮತ್ತು ಅವುಗಳ ದಾಖಲೆಗಳನ್ನು ಇಡುವುದು.
* ಪೋಷಕರ ಸಭೆ ಕರೆದು ವಿದ್ಯಾರ್ಥಿಗಳ ಪ್ರಗತಿಯ ಬಗ್ಗೆ ಚರ್ಚಿಸುವುದು ಮತ್ತು ದಾಖಲಿಸುವುದು,
* ಪ್ರತಿ ಶಿಕ್ಷಕರು 10 ವಿದ್ಯಾರ್ಥಿಗಳನ್ನು ದತ್ತು ಪಡೆದು ಅವರ ಪ್ರಗತಿಗೆ ಕಾಳಜಿ ವಹಿಸುವುದು(ಫೋನ್ ಮಾಡುವುದು, ನಿರಂತರ ಸಂಪರ್ಕದಲ್ಲಿದ್ದು ಅವರ ಪ್ರಗತಿಯ ಬಗ್ಗೆ ಮುತುವರ್ಜಿ ವಹಿಸುವುದು ಮತ್ತು ಅವುಗಳನ್ನು ದಾಖಲಿಸುವುದು) ದಾಖಲೆಯನ್ನು ಇಡುವುದು.
* ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳ ಮನೆ ಮನೆಗೆ ಭೇಟಿ ಮಾಡಿ ಪಾಲಕರ ಪೊಷಕರೊಂದಿಗೆ ಸಮಾಲೋಚನಾ ಸಮಸ್ಯೆಗೆ ಪರಿಹಾರ ಸೂಚಿಸುವುದು. ಅಭ್ಯಾಸದ ಕಡೆಗೆ ಲಕ್ಷವಹಿಸಲು ಮತ್ತು ಓದಿನ ವಾತಾವರಣ ಮಾಡಿಕೊಡಲು ವಿನಂತಿಸುವುದು.
* ಮನೆಯಲ್ಲಿ ಓದಲು ಒಂದು ವಿಶೇಷ ವೇಳಾಪಟ್ಟಿ ತಯಾರಿಸಿ ವಿದ್ಯಾರ್ಥಿಗಳಿಗೆ ನೀಡುವುದು, ಪ್ರತಿ ವಿಷಯ ಶಿಕ್ಷಕರಿಂದ ನೀಲನಕ್ಷೆ ಸಹಿತವಾಗಿ ಪ್ರಶ್ನೆಪತ್ರಿಕೆ ತಯಾರಿಸಿ ವಿದ್ಯಾರ್ಥಿಗಳಿಗೆ ನೀಡುವುದು.
* ಪ್ರತಿ ವಿಷಯದ ಸಂಪನ್ಮೂಲ ವ್ಯಕ್ತಿಗಳನ್ನು ಕರೆಯಿಸಿ ಮಕ್ಕಳಿಗೆ ವಿಶೇಷ ಬೋಧನೆ ಮಾಡಿಸುವುದು. ಪ್ರತಿ ವಿಷಯಕ್ಕೆ ಇಬ್ಬರು ಸಂಪನ್ಮೂಲ ವ್ಯಕ್ತಿಗಳನ್ನು ಕರೆಯಿಸುವುದು.
* ಪಾಠೋಪಕರಣಗಳನ್ನು ಬಳಸುವುದು ಮತ್ತು ಅವುಗಳ ಬಳಕೆಯ ದಾಖಲೆಯನ್ನು ರಜಿಸ್ಟರ್‌ನಲ್ಲಿ ನಮೂದಿಸುವುದು.
* ವಿಜ್ಞಾನ ಕ್ಲಬ್ ರಚಿಸುವುದು, ಮತ್ತು ಅದಕ್ಕೆ ಸಂಬಂಧಿಸಿದ ಕಾರ್ಯ ಕ್ರಮಗಳ ಯೋಜಿತ ಪಟ್ಟಿ ರಚಿಸಿ ಅದರಂತೆ ಆಯೋಜನೆ ಮಾಡುವುದು.
Comments
Post a Comment